ನಂದಗೋಕುಲ ಧಾರಾವಾಹಿ ಖ್ಯಾತಿಯ ನಟಿ ಅರ್ಪಿತಾ ಗೌಡ ತಮ್ಮ ತೋಳಿನ ಮೇಲೆ ವಿಶೇಷ '3 ಇನ್ 1' ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Actress Arpitha Gowda: ನಂದಗಗೋಕುಲ ಪ್ರಿಯಾ ಖ್ಯಾತಿಯ ನಟಿ ಅರ್ಪಿತಾ ಗೌಡ, ವಿಶೇಷವಾದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮೂರು ಜೀವಗಳು ತಮ್ಮೊಂದಿಗೆ ಯಾವಾಗಲೂ ಜೊತೆಯಲ್ಲಿರಲಿ ಎಂಬ ಉದ್ದೇಶದಿಂದ ಅರ್ಪಿತಾ ಗೌಡ 3 ಇನ್ 1 ಟ್ಯಾಟೂ ಮೊರೆ ಹೋಗಿದ್ದಾರೆ. ಸದ್ಯ ಈ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಟ್ಯಾಟೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಳ್ಳೆಯ ಆಲೋಚನೆ ಎಂದು ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಹಾಗಾದ್ರೇ ತ್ರಿ ಇನ್ ಒನ್ ಟ್ಯಾಟೂ ಎಂದು ನೋಡೋಣ ಬನ್ನಿ.
ಅರ್ಪಿತಾ ಗೌಡ ಅವರ ಟ್ಯಾಟೂ ವಿಡಿಯೋಗೆ ಇಲ್ಲಿವರೆಗೆ 1 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ಕೊಂಚ ಭಯದಿಂದಲೇ ಕೈ ಹಿಂಭಾಗ ಅಂದ್ರೆ ತೋಳಿನ ಮೇಲೆ ಅರ್ಥಪೂರ್ಣವಾದ ಚಿತ್ತಾರವನ್ನು ಬಿಡಿಸಿಕೊಂಡಿದ್ದಾರೆ. ಇದೀಗ ಅರ್ಪಿತಾ ಗೌಡ ಮನೆಯಿಂದ ಎಷ್ಟೇ ದೂರ ಹೋದರೂ ಮೂವರು ವ್ಯಕ್ತಿಗಳು ಸದಾ ಜೊತೆಯಲ್ಲಿರುತ್ತಾರೆ. ಯಾರು ಆ ಮೂವರು ವ್ಯಕ್ತಿಗಳು ಗೊತ್ತಾ?
ಯಾರು ಆ ಮೂವರು?
ಟ್ಯಾಟೂ ಸೆಂಟರ್ವೊಂದಕ್ಕೆ ತೆರಳಿದ ಅರ್ಪಿತಾ ಗೌಡ, ಅಪ್ಪ-ಅಮ್ಮ ಮತ್ತು ಪತಿಯ ಚಿತ್ರವುಳ್ಳ ಒಂದು ಟ್ಯಾಟೂ ಬೇಕೆಂದಿದ್ದಾರೆ. ಟ್ಯಾಟೂ ಆರ್ಟಿಸ್ಟ್ ಮೂವರ ಪೋಟೋ ಪಡೆದುಕೊಂಡು, ಮುಖ ಚಹರೆಯ ರೇಖೆಯನ್ನು ಸಿದ್ದಪಡಿಸಿಕೊಂಡು ಸುಂದರವಾಗಿ ತೋಳಿನ ಮೇಲೆ ಬಿಡಿಸಿದ್ದಾರೆ. ಈ ಮೂರು ರೇಖೆ ಜೊತೆಯಲ್ಲಿ ಚಂದ್ರ ಮತ್ತು ಮೂರು ನಕ್ರತ್ರಗಳನ್ನು ಸಹ ರಚಿಸಿದ್ದಾರೆ.
ನಂದಗೋಕುಲ ಮೂಲಕ ಮನೆಮಾತಾದ ಅರ್ಪಿತಾ ಗೌಡ!
ನಂದಗೋಕುಲದ ಹಿರಿಯ ಸೊಸೆಯಾಗಿರುವ ಪ್ರಿಯಾ ಅಂದ್ರೆ ಕರುನಾಡಿನ ಜನತೆಗೆ ವಿಶೇಷ ಪ್ರೀತಿ. ಆರಂಭದಲ್ಲಿ ಪ್ರಿಯಾ ಪಾತ್ರವನ್ನು ಕೊಂಚ ನೆಗೆಟಿವ್ ಶೇಡ್ನಲ್ಲಿ ತೋರಿಸಲಾಗಿತ್ತು. ಸೀರಿಯಲ್ ಮುಂದುವರಿದಂತೆ ಪ್ರಿಯಾ ಎಲ್ಲರ ಜೊತೆ ಚೆನ್ನಾಗಿದ್ದಾಳೆ. ಆದ್ರೆ ಮದುವೆ ಸಮಯದಲ್ಲಿ ಹೇಳಿರುವ ಸುಳ್ಳುಗಳು ಇನ್ನು ಪ್ರಿಯಾ ಸುತ್ತವೇ ಗಿರಕಿ ಹೊಡೆಯುತ್ತಿವೆ.
ಮತ್ತೊಂದು ಸಂಕಷ್ಟದಲ್ಲಿ ಸಿಲುಕಿರೋ ಪ್ರಿಯಾ
ಈಗಾಗಲೇ ಪ್ರಿಯಾ ಬಳಿಯಲ್ಲಿರುವ ಚಿನ್ನಾಭರಣಗಳೆಲ್ಲವೂ ನಕಲಿ ಎಂಬ ವಿಷಯ ಅಮೂಲ್ಯಾ ಮತ್ತು ಮೀನಾಗೆ ಗೊತ್ತಾಗಿದೆ. ಆದರೂ ಈ ವಿಷಯವನ್ನು ಇಬ್ಬರೂ ಯಾರ ಮುಂದೆಯೂ ರಿವೀಲ್ ಮಾಡದೇ ಗುಟ್ಟುನ್ನು ಕಾಪಾಡಿಕೊಂಡಿದ್ದಾರೆ. ಮದುವೆ ಸಮಯದಲ್ಲಿ ಪ್ರಿಯಾ ಸ್ನಾತಕೋತ್ತರ ಪದವೀಧರೆ ಎಂದು ಸುಳ್ಳು ಹೇಳಲಾಗಿತ್ತು. ಈ ವಿಷಯ ತಿಳಿಯದೇ ನಂದಕುಮಾರ್, ಸೊಸೆಗೆ ಶಾಲೆಯಲ್ಲಿ ಪಾಠ ಮಾಡುವ ಕೆಲಸಕ್ಕೆ ಕಳುಹಿಸಿದ್ದಾನೆ. ಶಾಲೆಯಲ್ಲಿ ದಾಖಲೆಗಳೆಲ್ಲವೂ ಮಿಸ್ ಆಗಿದೆ ಎಂದು ಸುಳ್ಳು ಹೇಳಿ ಬೀಸೋ ದೊಣ್ಣೆಯಿಂದ ಪ್ರಿಯಾ ಪಾರಾಗಿದ್ದಾಳೆ.
ಈ ಸಮಸ್ಯೆಯಿಂದ ಪ್ರಿಯಾ ಹೇಗೆ ಹೊರೆಗೆ ಬರ್ತಾಳೆ? ಪ್ರಿಯಾ ಸಹಾಯಕ್ಕೆ ಅಮೂಲ್ಯಾ ಮತ್ತು ಮೀನಾ ಬರ್ತಾಳಾ? ಒಂದು ವೇಳೆ ಈ ವಿಷಯ ತಿಳಿದ್ರೆ ಮಾಧವ ಮತ್ತು ನಂದಕುಮಾರ ರಿಯಾಕ್ಷನ್ ಹೇಗಿರಲಿದೆ ಎಂಬುವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.






